ಅಂಬೆಕಾಲಿನ ಹುಡುಗ
ಕೆಸರಲೆದ್ದು ಬಂದು
ಜನರಿಂದ ಮೈಚರ್ಮಸುಲಿದು
ಬರಿತಲೆಯ ತುಂಬಿಸಿದ ||೧||
ವ್ಯಯ್ಯಾರದ ಹುಡುಗಿ
ನೂಪುರದ ಮೇಲಿನ ಬೆಡಗಿ
ಕಲೆಗಳ ಕಲೆ ತೆಗೆದು
ಚಿತ್ರ ಒನಪಿಸಿ ಮುಗುಳ್ನಕ್ಕಳು ||೨||
ಯೌವನದ ಯುವಕ
ವಯಸ್ಸಿಗೆ ಬಾಯಾರಿ
ಸಭೆಯಲಿ ಕುಡಿನೋಟ ಬೀರಿ
ಕಳ್ಳತನದಲಿ ಮಿಂದನು ||೩||
ಒಂಟಿಕಾಲಿನ ಮುದುಕಿ
ಎದ್ದಳೋ, ಬಿದ್ದಳೋ, ತಿರುಗಾಡಿದಳೋ
ಮೌನದಲಿ ಮಾತನಾಡಿ
ಬಾನಿಗೆ ಚಪ್ಪರ ಕಟ್ಟಿದಳು ||೪||
ಬೆನ್ನುಬಾಗಿದ ಮುದುಕ
ದಿನವಿಡೀ ಚಡಪಡಿಸಿ
ನಿಟ್ಟುಸಿರ ದಿನಕಳೆದು
ಅಸ್ತಮಾನದ ಸೂರ್ಯ ಕಂಡ ||೫||
ಏನ್ರಿ ಇಷ್ಟೊಂದು ಚೆನ್ನಾಗಿ ಬರಿತೀರ? ಇಷ್ಟು ದಿನ ಯಾಕೆ ಓದಲಿಲ್ಲ ಅಂತ ಅನ್ನಿಸೋ ಹಾಗೆ ಬರೆದಿದ್ದೀರ. ಹೀಗೆ ಸುಖವಾಗಿ, ಹಿತವಾಗಿ ಬರಿತಾ ಇರಿ.
ಶುಭವಾಗಲಿ