ಕವಿತೆ ಕವಿತೆ ನನಗೊಂದು ಗುಟ್ಟು ಹೇಳುವೆಯಾ?
ನಂಬಿಕೆಗೆ ಬೆಲೆ ಕಟ್ಟುವೆಯಾ
ಜೀವನಕೆ ನಾಂದಿ ಹಾಡುವೆಯಾ
ಮನಸಿನ ಬೇನೆ ಮಾಸಿಸುವೆಯಾ ||೧||
ಕವಿತೆ ಕವಿತೆ ನೀನು ಎಲ್ಲಿ ಹೋದೆ?
ಹುಡುಕಾಡಿ ನಿದ್ದೆ ಹೋದೆಯಾ
ಬೇನೆಯಲಿ ಬೆಂದು ಹೋದೆಯ
ಬಯಸಿ ಬಯಸಿ ಸೋತು ಹೋದೆಯಾ ||೨||
ಕವಿತೆ ಕವಿತೆ ನಾ ಎಲ್ಲಿ ತೊಡಗಲಿ?
ಮನಸಲಿ ಬಂದಿಸಿಡಲೇ
ನಗಲೇ, ಅಳಲೇ, ಕಣ್ಣೀರಿಡಲೇ,
ನೀ ಬೇಗ ಹೇಳು, ಹೇಳು, ಹೇಳು…. |೩|
ತುಂಬ ಚೆನ್ನಾಗಿದೆ…. ಕವಿತೆ ಸಿಕ್ಕದ ಮೇಲೆ ತಿಳಿಸಿ!
Dear Sir,
I like ur poet pl do continue best of luck