Feeds:
Posts
ಟಿಪ್ಪಣಿಗಳು

Posts Tagged ‘ಪ್ರೇಮ’


ಮನಸೆಂದರೆ ಶ್ರುತಿಗಿರುವ ತಂಬೂರಿಯಂತೆ, ಪ್ರತೀ ಅಕ್ಷರವೂ ಮೀಟಬೇಕಂತೆ. ತಂಬೂರಿ ಮೀಟಿ ಶ್ರುತಿ ಸರಿಮಾಡುತಿದ್ದರೆ, ನಾನೊಂದು ಆಳವಾದ ಬಾವಿಯಲ್ಲಿ ಮುಳುಗಿ ಹೋದಂತಾಗಿ ಇದೋ ಈಗ ಇದನ್ನು ಬರೆಯಲಾರಂಭಿಸಿದೆ.
ಮನಸು ಈಗ ತಾನೆ ಬಂದ ಮುಂಗಾರು ಮಳೆಗೆ ಒದ್ದೆಯಾದ ಮಣ್ಣಿನಂತಿದೆ, ಆ ಮಣ್ಣಿನ ಪರಿಮಳ ನಿನ್ನಲ್ಲಿ ಕಳೆದ ಸುಂದರ ಅನುಭವಗಳ ಹೂಮಳೆಗಳಿಗೆ ಸಾಕ್ಶಿ.
ಮನುಷ್ಯನ ಪ್ರತಿ ಕಥೆಯೂ ಒಂದು ನಗುವಿನಲ್ಲಿ ಆರಂಭವಾಗುತ್ತೆ. ನನ್ನ ಕಥೆ ಹೇಗೆ ಆರಂಭವಾಯಿತೋ? ಸ್ವರದಲ್ಲಿ ಲಯ ಹುಡುಕುವ ಸಂಗೀತ ಯೋಗಿಯಂತೆ ನಾನೂ ಹುಡುಕಬೇಕು. ಉತ್ತರ ತಿಳಿಯುವವರೆಗೆ ಹುಡುಕಲೇಬೇಕು. ಆದರೆ ಕಾಲನ ಕಾಲನಾಗುವ ಮುಂಚೆ ಉತ್ತರ ಸಿಕ್ಕಿತೇ? ಅಸ್ತಮಾನದಲಿ ಕಳೆದು ಹೋದ ಸೂರ್ಯನಂತೆ, ಬತ್ತಿಹೋದ ಕಣ್ಣೀರಿನಂತೆ ನನ್ನ ಕನಸೂ ಜಾರಿ ಹೋದಿತೇ?
ಬ್ರಹ್ಮ ಅಪರೂಪವಾಗಿ ಹೆಣ್ಣಿಗಿರುವ ಧ್ಯೆರ್ಯವನ್ನೂ, ಮೇಧಾ ಶಕ್ತಿಯನ್ನೂ, ವಿಶಿಷ್ಟವಾದ ಸಂದರ್ಯವನ್ನೂ, ಯಾರಿಗೂ ಹೆದರದ ವ್ಯಕ್ತಿತ್ವವನ್ನೂ ಒಂದುಗೂಡಿಸಿ ನಿನ್ನನ್ನು ಸೃಶ್ಟಿಸಿದ ಅಂದುಕೊಳ್ಳುತ್ತೀನಿ. ಮನಸಲಿ ಅಂದುಕೊಂಡೆ ನೀ ಇರುವೆ ಈ ಕೆಳಗಿನಂತೆ

ನನ್ನ ಬಾಳಸಂಗಾತಿ ಗೆಳತಿಯಾಗಿರಬೇಕು, ಪ್ರಾಣಸ್ನೇಹಿತೆಯಾಗಿರಬೇಕು
ಹುಸಿ ಕೋಪವ ಹೊಂದಿರಬೇಕು
ಮನಸ ಮೀಟುವಳಾಗಿರಬೇಕು
ತನ್ನದೇ ವ್ಯಕ್ತಿತ್ಯ ಹೊಂದಿ ಗಂಬೀರವಂತೆಯಾಗಿರಬೇಕು
ನ್ಯಾಯ ಅನ್ಯಾಯಗಳ ವಿಮರ್ಶಕಿಯಾಗಿರಬೇಕು
ವಾದಗಳ ಗೆಲ್ಲಬೇಕು ಸಲೀಸಾಗಿ
ತನ್ನ ಮನಸ ನ್ಯಾಯವ ಕೊನೆಯವರೆಗು ಹೊಂದಿರಬೇಕು
ತನಗೇನು ಬೇಕು ಎಂದು ಕೇಳಿಕೊಳ್ಳುವವಾಗಿರಬೇಕು
ತುಂಟಿಯಾಗಿರಬೇಕು, ತರಲೆ ಎಬ್ಬಿಸುತಿರಬೇಕು
ಜಗದ ಆಗುಹೋಗುಗಳ ತಿಳಿದವಳಾಗಿರಬೇಕು

ಅವಳಿಗೆ ಕೊಡುವೆ ನಾ ನನ್ನ ವ್ಯಕ್ತಿತ್ಯವಾ
ಧಾರೆಯೆರುವೆ ಮನಸಿನ ಪ್ರಾಣವ
ಅವಳ ಸಂತೋಷ ದು:ಖದಲಿ ಭಾಗಿಯಾಗಿರುವೆ
ಕಾಲನ ಕರೆಯ ತನಕ
ಸಂತೋಷದ ಉತ್ತುಂಗಕ್ಕೆ ಒಯ್ಯುವೆ ಅವಳ
ಅವಳ ನಾ ಕಾಪಾಡುವೆ ವಜ್ರದ ಕಾಠಿಣ್ಯದಂತೆ
ಕೊಡುವೆ ನಾ ಅವಳಿಗೆ ಜೀವನ ಉಡುಗೊರ‍ೆ

’ನಾ ನಿನ್ನ ಪ್ರೀತಿಸುವೆ’ ಎಂದು ಕೂಗಿ ಕೂಗಿ ಪಂಚೇಂದ್ರಿಯಗಳಿಂದಲೂ ಕರೆದೆ. ಪ್ರೇಮದ ಕನಸಿನ ಸೌಧವನ್ನು ಕಟ್ಟಿದೆ. ಚಿಂತಿಸಿದೆ, ಸಂತೋಷಿಸಿದೆ. ಮನುಷ ಮನುಷನ ನಡುವಿನ ಭಾವನೆಗಳ ಹಂಚಿದೆ. ಮನುಷ್ಯ ತನ್ನ ಭಾವನೆಗಳ ಇನ್ನೊಂದು ಮನುಷ್ಯನ ಮೇಲಿರಿಸಿದ ಗುರಿಯೇ ಪರಿಪೂಣರ‍್ನತೆ ಎನಿಸಿದೆ. ರಾತ್ರೆ ನಿದ್ದೆ ಇಲ್ಲದೆ ಕಳೆದೆ ಭಯದಿಂದಲೋ, ಏಕಾಂತತೆಯೆಂದಲೋ ಅಲ್ಲ ಕೇವಲ ಪ್ರೇಮಮಯವಾದ ಆಲೋಚನೆಗಳಿಂದ.

ನಿನ್ನಲ್ಲಿ ನಾನು ’ನೀ ಇಂದು ತುಂಬಾ ಚಂದ ಕಾಣುತ್ತೀರಿ’ ಅಂದಾಗ ನಿನ್ನ ಸಂತೋಷ ಕಂಡು ಗಾಳಿಯಿಂದ ತುಂಬಿದ ಬಲೂನಿನಂತೆ ಮೇಲೇರಿದೆ. ಕ್ಷಣದಲಿ, ಸಿಗಲಾರೆಯೆಂದು ನೆನಪಾಗಿ ಬಲೂನಿಗೆ ಪಿನ್ನು ಚುಚ್ಚಿ ಅತ್ತೆ ಮನಸಲಿ.

ಯಾವ ದೇವರೂ ಒಲಿದು ನಮ್ಮ ಭೇಟಿಯ ಅವಕಾಶಿಸಲಿಲ್ಲ. ಯಾವ ಉದ್ಧಂಡ ಚರಿತೆಯೂ ನನ್ನ ಕನಸ ವಾಸ್ತವಿಸಲಿಲ್ಲ.


ನಾನು ಒಂದು ಕಾಲದಲಿ ಏನೆಲ್ಲಾ ವ್ಯಾಪಾರ? ಮಾಡಿದವನು. ನನ್ನ ಬುದ್ದಿವಂತಿಕೆಯಿಂದ ವ್ಯವಹಾರದಲಿ ತುಂಬಾ ಜನರ ನೈತಿಕವಾಗಿ ಸೋಲಿಸಿದವನು. ಯಾವಾಗ ಏನಾದರೆ ಏನಾದಿತು ಎಂದು ಕರಾರುವಕ್ಕಾಗಿ ಲೆಕ್ಕ ಹಾಕುವವನು. ಜೀವನವೆಂದರೆ ದೊಡ್ಡ ವ್ಯವಹಾರ. ನಿರಂತರ ಸಂಘರ್ಷದಿಂದ ಕೃಷಿಕನಾದವನು. ಇಂದಿನ ಪಾಠಗಲಿಂದ ನಾಳಿನ ಬದುಕನ್ನು ನಿರ್ಧರಿಸುವವನು. ಆವೇಶರಹಿತ, ಕೋಪರಹಿತ ಮನುಜನ ನಡುವಿನ ಪ್ರೇಮಕ್ಕಾಗಿ ನಿರಂತರ ಕೃಶಿಕನು. ಕೊನೆಗೂ ಇದೆಲ್ಲದರಿಂದಾಗಿ ನನ್ನನ್ನು ನಾ ಸೋಲಿಸಿ ಸೋತು ಹೋದೆ.

ಯಾಂತ್ರಿಕ ಜಗದಲಿ ತರ್ಕರಹಿತವಾದ ಕರಡು ಸಂತೋಷವೇ ಇಂದಿನ ನಿನ್ನ ಗುರಿಯಾಗಿರಬಹುದು. ಎರಡು ವರುಷದ ನಂತರ ದಿನನಿತ್ಯದ ಜಂಜಾಟದಲಿ ಬದುಕು ಸಪ್ಪೆ ಎನಿಸಬಹುದು. ಆದರೆ ಮನುಜನಿಗೆ ಇಂದು ಎಂಬುದು ಮಾಯೆಯ ಮಾಂತ್ರಿಕತೆ. ಅದರ ಮುಂದೆ ಎಲ್ಲವೂ ಗೌಣ. ಮುಂದಿನ ಆಲೋಚನೆಗಿರುವ ಬಹುದೊಡ್ಡ ಕಡಿವಾಣವೇ ಮನಸಿನ ಇಂದಿನ ಗುರಿ. ನಾವಿಬ್ಬರೇ ಎನ್ನುವ ಭಾವ ಬದುಕಿನ ಅತ್ಸುತ್ಸಾಹದ ಅತಿಸಂತೋಷದ ಎವರೆಸ್ಟ್. ದು:ಖ, ಸಂತೋಷ, ಛಲ, ಕೋಪ, ಅತಿಧ್ಯೆರ್ಯ ಮನುಷ ಸಹಜ. ಎಲ್ಲವೂ ತೂಕದಲ್ಲಿ ಎದ್ದರೆ ಅವ ಸಹಜನು. ಇದು ಎಲ್ಲದಿದ್ದರೆ ಅವ ಯೋಗಿಯೋನೋ ಅಲ್ಲ. ಕೃಷಿ ಮಾಡಲರಿಯದವನು. ಟೆನ್ಶನ್ ಇಲ್ಲದ ಬದುಕು ಉಪ್ಪು, ಖಾರವಿಲ್ಲದ ಊಟದಂತೆ. ಬದುಕಲ್ಲಿ ಕೆಲವೊಮ್ಮೆ ಸಿಹಿ ಇರುತ್ತೆ. ಕೆಲವೊಮ್ಮೆ ಕಹಿ. ಕೆಲವೊಮ್ಮೆ ಖಾರ, ಕೆಲವೊಮ್ಮೆ ಚೊಗರು. ರುಚಿ ಇಲ್ಲಾ ಅಂದ್ರೆ ಬದುಕು ಸಪ್ಪೆಯಾದಿತು. ಸಿಹಿ ಮಾತ್ರ ತಿಂದರೂ ಡಯಬಿಟೀಸ್ ಆಗೀತು.

ಮನುಜನಲ್ಲಿರುವ ಉತ್ತಮ ಗುಣವೇ ಗುರಿ ಎಂದುಕೊಂಡವನು ನಾನು. ಪ್ರತಿ ಮನುಜನಲಿರುವ ಗುರಿಯೂ ಪ್ರೇಮಕ್ಕಾಗಿಯೆ. ಹಣದ ಮೇಲಿನ ಪ್ರೇಮದಿಂದ ಧನಿಕನಾಗಿಯೂ, ಪ್ರೆಯಸಿಯ ಮೇಲಿನ ಪ್ರೇಮದಿಂದ ಸಂಸಾರಿಯೂ, ಸಂಸಾರದ ಮೇಲಿನ ಪ್ರೇಮದಿಂದ ಗ್ರುಹಸ್ಥನಾಗಿಯೂ, ವಿಜ್ಣಾನದ ಮೇಲಿನ ಪ್ರೇಮದಿಂದ ವಿಜ್ಣಾನಿಯಾಗಿಯೂ, ಸಮಾಜ, ಲೋಕದ ಮೇಲಿನ ಪ್ರೇಮದಿಂದ ಲೊಕನಾಯಕನೂ, ವೈರಾಗ್ಯದ ಪ್ರೇಮದಿಂದ ಯೋಗಿಯೋ ಆಗಿ ಮನುಜ ಬದಲಾಗುತ್ತಾನೆ.


ಪ್ರೇಮವೆಂದರೆ ಹಿಮಾಲಯದಲ್ಲಿ ಮಂಜುಗಡ್ದೆಯಾದ ನೀರಿನ ಬಿಂದು ಅಂದುಕೊಳ್ಳುತ್ತೀನಿ. ಸೂರ್ಯೋದಯದ ಬೆಳಕಿನ ಬದುಕಿಗೆ ಹಿಮಬಿಂದು ನಾಚಿ ನೀರಾಗಿಬಿಡುತ್ತದೆ. ಮೌನದ ಮೇಲಿನ ವಿಷಾದ, ಅಥವಾ ವಿಷಾದದ ಮೌನ. ಬದುಕು, ಪ್ರೇಮದ ಬೆಳಕು ಮರೆಯಾಗಿಸುವ ಕರಿಮೋಡ. ಪ್ರೇಮವೆಂದರೆ ಮನಸಿನ ಕುದುರೆಗಿರುವ ಲಗಾಮು ಅಲ್ಲವೇ?
ಪ್ರೀತಿ ಫಲಿಸಿ ಪ್ರೇಮವಾಗಲು ಹೃದಯಗಳು ಮಾತಾಡಬೇಕಂತೆ. ಎರದು ಮನಸು ಬೆರೆಯಬೇಕಂತೆ. ಅದು ಸಾಲದು ಎಂದು ನನ್ನ ಭಾವನೆ. ಎರಡು ಹೃದಯಗಳು , ಮನಸುಗಳು, ಒಂದೇ ಸಮಯದಲಿ ಬಜನೆಯ ತಾಳಗಳಂತೆ ತಟ್ಟಿದರೇನೇ ಪ್ರೇಮ ಝೇಂಕರಿಸಲು ಸಾದ್ಯ. ಕೇವಲ ಒಂದು ಕ್ಷಣದ ವ್ಯತ್ಯಾಸಕೆ ನಾ ನಿನ್ನ ಕಳೆದು ರ‍ೈಲ್ವೇ ಹಳಿಗಳಂತಾದೆ. ಆದರೆ ಒಂದತೂ ಸತ್ಯ ಅನಂತದಲಿ ರ‍ೈಲ್ವೇ ಹಳಿಗಳು ಸಂಗಮಿಸುವುವು.
ರಾತ್ರಿಯ ೨ ನೆಯ ಜಾವಕ್ಕೂ, ಬೆಳಗಿನ ಒಂದನೆಯ ಜಾವಕ್ಕೂ ವ್ಯತ್ಯಾಸವೇನು? ಬೆಳಗೆ ಹಕ್ಕಿಗಳ ಕಲರವ ಸೂರ್ಯನ ಆಗಮನಕ್ಕಿರುವ ಶಂಖನಾದವೋ, ಸೂರ್ಯನ ಎಳೆಕಿರನ ನೇರವಾಗಿ ಭೂದೇವಿಯ ಮುಕುಟ ಪ್ರಾಯಶಕ್ಕೆ ಅಪ್ಪುತ್ತಿದ್ದರೆ ನಾಚಿಕೆಯಿಂದ ಕರಗಿ, ವ್ಯಯ್ಯಾರದಿಂದ ಹರಿಯುತ್ತಿರುವ ಹಿಮಬಿಂದುಗಳು ಜೀವನ ಚಲನೆಗಿರುವ ನಾಂದಿಯ ಸಂಕೇತ. ಅದೇ ಮುಸ್ಸಂಜೆಯಲಿ ಕೊನೆಯ ಕಿರನಕ್ಕೆ ಟಾಟಾ ಹೆಳಿ ಕೀಟಗಳ ರಂಪಾಟಕ್ಕೆ ಕೂಗಾಟಕ್ಕೆ ದು:ಖದಿಂದ ನೀರ ಬಿಂದುಗಳು, ಘನೀಭವಿಸಿರುವುದು ಚಲನೆಯ ನಿಲುಗಡೆಯ ಅಂತ್ಯಕ್ಕಿರುವ ಸಂಕೇತದಂತಿದೆ.
ಪ್ರೇಮದ ಅಗಲುವಿಕೆಯಿಂದ ಮೇಲಿನ ವೈರಾಗ್ಯ ಏನಿರುತ್ತೆ? ಒರಸದೇ ಬಿಟ್ಟ ಕಣ್ಣೀರನ್ನು ಕೇಳಿದರೇ ತಿಳಿಯುತ್ತೆ ಅದರ ಆಳ. ಆ ವೈರಾಗ್ಯದಲ್ಲಿ ಎಲ್ಲವೂ ಶೂನ್ಯ. ಅಂಕೆಮಾಲೆಯಲಿ ಶೂನ್ಯದಿಂದ ಶುರುವಾದ ೧, ೨ ಗಳು ತಪ್ಪು ಅಂದು ಕೊಂಡಿದೀನಿ. ನಿಜವಾಗಿಯೂ ಎಲ್ಲದರ ಅಂತ್ಯವೂ ಶೂನ್ಯವೇ. ವೈರಾಗ್ಯವೆಂದರೆ ದು:ಖದ ಕಣ್ಣೀರಲ್ಲ. ಕಣ್ಣೀರು ಬರದೇ ಉಂಟಾಗುವ ವೇದನೆ. ಪ್ರೇಮಿ ಎಂದರೆ ಶೂನ್ಯದ ಸರೋವರದಲಿ ನಿಂತ ಏಕಾಂತ ವೃಕ್ಷ. ಎಲ್ಲವೂ ಕಳಕೊಂಡಂತೆ. ಎಲೆಗಳನೂ, ಹೂಗಳನೂ, ತಾನೇ ಅರಳಿಸಬೇಕು. ಮನಸು ಹಿನ್ನೀರ ಒದ್ದೆಯಲಿ ಮೈ ಆರಿಸುವ ಆಮೆಯಂತಿರುತ್ತೆ. ಎಲ್ಲವನೂ ಮುಚ್ಚಿದ ಚಿಪ್ಪಿನೊಳಗೆ ಹುದುಗಿಕೊಂಡಿರುವ ತಲೆ ಆಚೀಚೆ ಬರಲಾರದೇನೋ? ರಾತ್ರಿಯೆಲ್ಲಾ ಚಿಂತಿಸಿ,ಚಿಂತಿಸಿ ಬೆಳಗಾದ ಮೇಲೆ ಇನ್ನು ಚಿಂತಿಸುವಿದಿಲ್ಲವೆಂದುಕೊಂಡು ನಿದ್ದೆ ಹೋಗಿ, ಕನಸಲ್ಲೂ ಅದೇ ಕಂಡು, ಅದರ ಚಿಂತೆಯಲೇ ದಿನಚರಿ ಆರಂಭಿಸುವುಧೇ ಪ್ರೇಮ ವೈರಾಗ್ಯ.


ನೀನು ದೊರಕುವುದಿಲ್ಲವೆಂದಾಕ್ಷಣ ಸಾವಿರ ಬಲ್ಬುಗಳಿರುವ ರೂಮಲ್ಲಿ ಒಮ್ಮೆಲೇ ಕರೆಂಟು ಹೋದರೆ ಬರುವ ’ನಿಶ್ಶಬ್ದ’ದಂತಾಗಿತ್ತು. ಆ ನಿಶ್ಶಬ್ದದಲ್ಲಿರುವ ಮನಸು ನಿನ್ನ ಚಿತ್ರಪತವನ್ನು ಮನಸಲ್ಲೇ ಧ್ಯಾನಿಸಿ, ಪೂಜಿಸಿ ಬರುವ ಅಲೌಕಿಕಾನಂದದ ಮೇಲಿರುವ, ತಾನು ತನ್ನನ್ನೇ ಆಶ್ರಯಿಸಿ ಬದುಕಲಿರುವ ದಿನಗಳ ಮೆಲುಕಾಟದಲ್ಲಿನ ವೇದನೆ ಅರ್ಥಮಡಿದರೆ ಮಳೆಗಾಲದಲ್ಲಿನ ಚಂಡಮಾರುತದ ಹಿಂದಿನ ಆರ್ದತೆಯಂತೆ ಭಾಸವಾಗುತ್ತಿತ್ತು.
ನೋವಾಗಿಲ್ಲವೆಂದು ಹೇಳಿ ನಾ ನನ್ನನ್ನೇ ಆತ್ಮವಂಚನೆ ಖಂಡಿತ ಮಾಡಲಾರೆ. ನಿಜವಾಗಿಯೂ ಪ್ರೇಮದ ಫಿಲಿಂಗ್ ಗಳಿಗೆ ಏನೂ ಲಾಜಿಕ್ ಗಳಿಲ್ಲ.

ನನ್ನಲ್ಲಿನ ಮನಸು ದಿನ ಬೆಳಗಾದರೆ ಹಿಂಡಿ ಹೇಳುವುದೊಂದೇ ನಿನ್ನಲ್ಲಿನ ಪ್ರೇಮಕ್ಕಿಂತ ಶ್ರೇಷ್ಠತೆ ಬೇರೊಂದಿಲ್ಲ. ಭುವಿಯಲ್ಲಿನ ಸಕಲ ಜೀವರಾಶಿಗೂ ನಾಳೆ ಕಾಣುವುದಿದ್ದರೆ ಅದು ಪ್ರೇಮದಿಂದ ಮಾತ್ರ. ಆದರೆ ನನ್ನಲ್ಲಿನ ನೀನು ಚೆಂಡೆಯ ಪೆಟ್ಟಿನಂತೆ ಮಾರ್ದನಿಸಿ ಹೇಳುತಿದೆ ಪ್ರೇಮಕಿಂತ ಜೀವನ ಶ್ರೇಷ್ಠ.

ಹೌದು ನನಗೆ ಪ್ರೇಮದ ಹುಚ್ಚು. ಹುಚ್ಚಿಗೂ, ವಾಸ್ತವಿಕತೆಗೂ ಏನು ವ್ಯತ್ಯಾಸ? ಹುಚ್ಚಿನಲ್ಲಿ ಆಚಿರಿಸಿದ್ದೆಲ್ಲವೂ, ಹೇಳಿದ್ದೆಲ್ಲವೂ ತಪ್ಪು. ವಾಸ್ತವಿಕತೆಯಲ್ಲಿ ಒಂದು ಸಣ್ಣ ಅಲುಗಾಟ ಕೂಡ ದಿಟ ಮತ್ತು ಬೇಕೆನ್ನುವ ಭಾವ.

ಒಂದು ಸುಂದರವಾದ ಅನುಭವ ತಂಗಾಳಿಯಳಿ ಶುರುವಾಗಿ, ಆಕರ್ಷಿಸಿ, ಹತ್ತಿರ ಬಂದು, ಹಿಮಾಲಯದೆತ್ತರಕೆ ಬೆಳೆದು, ಕರಗಿ, ಭೂಕಂಪನದೊಂದಿಗೆ ಬಿದ್ದು ಅದೃಶ್ಯವಾದಂತೆ- ಈ ಪ್ರೇಮ ಒಂದು ಅಗ್ನಿಯಲ್ಲಿ ಬೆಂದುಹೋಗುತ್ತೆ ಅಂತ ಅನಿಸ್ತೀನಿ. ನನಗೆ ಗೊತ್ತು ಮರುಕದಿಂದ ಪ್ರೇಮ ಹುಟ್ಟದು.

ಕನಸೇ ನಾ ಯಾವಗ ಪುನ: ಕಾಣಲಿ ನಿನ್ನ
ಬೆಂಬಿಡದೆ ಹುಡುಗುತನದಿಂದ ಕಾಡುತ್ತಿದ್ದೆ ನನ್ನ
ಝೇಂಕರಿಸಿ ಮುಗುಳ್ನಗಿಸುತ್ತಿದ್ದೆ ಅಜ್ನಾನ ಲೋಕದಲಿ
ಈಗ ಎಷ್ಟು ಅಪರಿಚಿತರು ನಾವು
ರಾತ್ರಿಗಳು ನನ್ನ ನೋಡಿ ಮರುಕದಿಂದ ಮಾತಾಡದೆ ಹೊರಡುತಿವೆ
ನಿನ್ನ ಕಾಣದೆ ಹೃದಯ ಬೇನೆಯಲಿ ಬೇಯುತಿರುವೆ
ಈಗ ಬರುವುದು ಬರೇ ಜ಼್ನಾಪಕಗಳು
ಕಣ್ಣೀರ ಬಿಂದುಗಳು.

ಮಾನಸಿಕ ಒಂಟಿತನವೆಂಬುದು ಪ್ರಪಂಚದ ಅತಿದೊಡ್ಡ ವೇದನೆ. ಒಂಟಿತನದಲ್ಲೇ ಕಳೆದವನಿಗೆ ಅದು ಏನೇನೂ ಅನಿಸದೇ ಇರಬಹುದು. ಆದರೆ ಇನ್ನಿರುವ ಬದುಕು ಒಂಟಿತನವೆಂದರೆ ಗಾಳಿಗೆ ನಡುಗುವ ಅಡಿಕೆಮರದಂತೆ ಮನಸು ನದುಗುತಿದೆ. ಇತರರ ಕೋಪ, ದ್ವೇಷ, ಬೇಸರವನ್ನು ಸಹನೆ ತಾಳ್ಮೆಯಿಂದ ಕಳೆದೆ.

ಪ್ರೇಮವೆಂದರೆ ನಿರಂತರವಾಗಿ ಸಂಗಾತಿಯ ಒಳಿತಿಗೋಸ್ಕರ ಆಲೋಚಿಸುವ ನಂಬಿಕೆ. ನಿನ್ನಯ ಕಥೆಗಳ ಮೆಲುದಾಡುವಿಕೆ. ಬೆಂಬಿಡದೆ ಕಾಡುವ ಪ್ರೀತಿಯ ಸೃತಿಗಳು, ಪ್ರತೀ ಕದಲುವಿಕೆಯನ್ನೂ ಅಂತರಂಗದಲ್ಲಿ ವಿಮೋಚನೆಗೊಳಿಸುತ್ತಾ ಇರುವ ಆಮೋದನೆ. ಈ ವಿಮೋಚನೆಯನ್ನು ತನ್ನಲ್ಲಿಯೇ ಬೇಲಿ ಹಾಕಿ ಬಂದಿಸಿಟ್ಟು ಅದನ್ನೇ ಒಬ್ಬ ಪ್ರೆಕ್ಷಕನಾಗಿ ಅನುಭವಿಸುತ್ತಾ ನಿರ್ಲಿಪ್ತತೆಯಿಂದ ದಿನ ಕಳೆಯುವುದೇ ಪ್ರೇಮ. ಏಕಾಗ್ರತೆಯಿಂದ ಪ್ರೇಮಿಸಿದವನ/ಳ ಒಳಿತೇ ತನ್ನ ಸುಖವೆಂದುಕೊಳ್ಳುತ್ತಾ, ಬೇನೆಯನ್ನು ಮಾನಸಿಕವಾಗಿ ಆಸ್ವಾದಿಸುವುಧೇ ಪ್ರೇಮ. ಹೌದು ಇದು ಋಷಿಯ ತಪಸ್ಸಿನಂತೆಯೇ. ಎಲ್ಲಿ ಪ್ರ‍ೇಮವಿದೆಯೋ ಅಲ್ಲಿ ಆನಂದವಿದೆ. ಎಲ್ಲಿ ಆನಂದವಿದೆಯೋ ಅಲ್ಲಿ ವೈರಾಗ್ಯವಿದೆ. ಈ ವೈರಾಗ್ಯ ಯಾರಿಗೆ ಆನಂದಿಸಲು ಸಾದ್ಯವಿದೆಯೋ ಅವನು ಜೀವನ ಕಂಡಿತ ಗೆಲ್ಲುತ್ತಾನೆ. ಪ್ರತಿ ಬೆಳಕಿನ ಹಿಂದೆಯೂ ಒಂದು ಕತ್ತಲು ಖಂಡಿತ ಇದೆ. ಅವನು ಉಜ್ವಲವಾಗಿ ಪ್ರಕಾಶಿಸುತ್ತಾನೆಂದರೆ ಅವನ ಹಿಂದೆ ಕತ್ತಲೂ ಗಾಢಾಂಧಖಾರದಲಿಧೆ ಎಂದರ್ಥ. ಎಲ್ಲಿ ಸುಂದರತೆ ಇದೆಯೋ ಅಲ್ಲಿ ಹೃದಯ ಬೇನೆ ಇದೆ. ಆದುದರಿಂದ ಸೋಲಲ್ಲೂ, ಗೆಲುವಲ್ಲೂ ಕಣ್ಣಿರು ಬರುತ್ತೆ. ಒಂದು ಉತೃಷ್ಟ ಆನಂದದ ನಂತರ ಎಲ್ಲವನ್ನೂ ಕಳೆದು ಕೊನೆಗೆ ತನ್ನನ್ನು ತಾನು ಕಳೆದು ವಿಜಯ ಸಾದಿಸಬಹುದು. ಕೊನೆಗೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದೂ, ಭುಧ್ಧ ಕಂಡುಕೊಂಡದ್ದೂ, ಮಹಾವೀರನಿಗೆ ದೊರಕಿದ್ದೂ, ಆ ಉತೃಷ್ಟ ಆನಂದ. ಅದುವೇ ಶಾಶ್ವತಾನಂದಕ್ಕೆ ನಾಂದಿ.


ಪ್ರೇಮಕ್ಕೂ ಅರ್ಹತೆಗೂ ಸಂಬಧವಿದೆಯೇ? ಭವಿಷ್ಯದ ಬಗ್ಗೆಗಿನ ಫೂರ‍್ಣವಿರಾಮ ಗೊತ್ತಿಲ್ಲದೆ ಮೊದಲನೆ ಅಕ್ಷರ ಬರೆಯುವೆದೇ ಪ್ರೇಮವೆಂದರೆ? ಅಂತರ್ಗತವಾದ ಪ್ರಶ್ನೆಗೆ ಉತ್ತರ ಕೊದುವ ಸ್ಥಿಥಿಯಲ್ಲಿ ನಾನಿಲ್ಲ. ನೈತಿಕ ಬೇಲಿಗಳು ಪ್ರೇಮಕ್ಕಿರುವ ಬೇಲಿ ಅಂದುಕುಳ್ಳುತ್ತೀನಿ. ಒಂದು ಅಂಗಿ ಸರಿ ಇಲ್ಲ ಅಂತ ಹಾಗಿದ ಮೇಲೆ ಅನಿಸಿ ಬಿಸಾದಳು ಇದೇನು ವಸ್ತ್ರಬಂಡಾರವೆ, ಹೇಳು? ಯಾವುದು ನೈತಿಕತೆ, ಅನೈಕಿಕತೆ ಎಂದು ನಿರ್ದರಿಸುವರಾರು? ಧರ್ಮ ಗ್ರಂಥವೋ? ಧರ್ಮ ಪರಿಪಾಲಕರೊ? ಅಲ್ಲ ಅತೀತನಾದ ದೇವರೋ? ಫ್ರೇಮ ವಿಕಸಿಸುವ ಮುಂಚೆ ಬಂದಿಸಿಟ್ಟು ನಂತರ ಕರೆಸಿಕಳ್ಳುವುದು ದೇವರಿಗೆ ನ್ಯಾಯವೇ?

ಮತ ಧರ‍್ಮಗಳು ಒಬ್ಬನೇ ದೇವರಿಗಿರುವ ಜನಪ್ರವಾಹ ತಪ್ಪಿಸಲು ಮಾನವನು ಮಾಡಿದ ವಿದಾನ. ಧರ್ಮದ ಬಗ್ಗೆ ಮಾನವನಿಗಿರುವ ಭಯವೇ ದೇವರು. ಆ ಭಯ ಹೋಗಲಾದಿಸಲು ಮಾನವ ಪ್ರತಿ ದಿನವೂ ಭೌತಿಕತ್ವದಿಂದ ಆಧ್ಯಾತ್ಮಿಕಕ್ಕೆ ಹೋಗುತಿರುತ್ತಾನೆ. ಮತ, ಧರ್ಮ ವನ್ನು ನಂಬುವವರು ದೇವರನ್ನು ಮೊದಲು ನಂಬಿ ನಂತರ ಕೆಲಸ ಆರಂಭಿಸುತ್ತಾರೆ. ನಂಬದವರು ಕೆಲಸ ಮಾಡಿ ಕಾರಣ ಹುಡುಕುತ್ತಾರೆ. ಮಾನವ ತನ್ನ ಸರ್ವಸ್ವ ಕಳೆದಾಗಲೂ ದೇವರ ನಂಬಿ ಧ್ಯೆರ್ಯ ಪಡುತ್ತಾನೆ. ಇಂದಿನ ಕಾಲದಲಿ ಆ ಧೈರ್ಯ ಸಮಾಜದಿಂದ, ವಿಜ್ನಾನದಿಂದ ದೊರಕುವುದರಿಂದ ದೇವರ ಮೇಲಿನ ವಿಸ್ವಾಸ ಸ್ವಲ್ಪ ಕಡಿಮೆಯಾಗಿದೆ.

ಎಲ್ಲವನ್ನೂ ಬಿಟ್ಟು ಪೂರ‍್ಣ ಶೂನ್ಯಕ್ಕೆ ಹೋಗಬೇಕು. ಒಂದೇ ಒಂದು ಪೂರ್ಣ ಮಧುರಾನುಭವ ಇಸ್ಟೊಂದು ವೈರಾಗ್ಯ ಉಂಟುಮಾಡುವುದು ತುಂಬಾ ನೋವಿನ ಸಂಗತಿ. ಬದುಕಿನಾಚೇನಿದೆ ಎಂದು ನೋಡಬೇಕು. ನನ್ನ ಮನಸಿನೊಳಗಿನ ಮನಸನು ಮೀಟಿ ಅಸ್ಥಿತ್ವದ ವೇದ ಪಾರಾಯನ ಮಾದಬೇಕು. ಮನುಜ ಕೇವಲ ನೈತಿಕತೆಗಾಗಿ ಬದುಕುವುದೊ? ಬೋಧನೆಗಳು, ಮೆಡಿಟೇಶನುಗಳು, ಧರ‍್ಮಗಳು ಕೇವಲ ಅದಕ್ಕಿರುವ ಬೇಲಿಯೊ? ಯಾವ ದುಷ್ಟ ಕಾರ್ಯ ಮಾಡುವ ದರೋಡೆಕೋರನೂ ತನ್ನವರು ಎಂಬ ಪ್ರೇಮಕ್ಕೊಸ್ಕರ ತಾನೆ ದುಷ್ಟತನ ಮಾಡುತ್ತಾನೆ? ತನ್ನವರು ಎಂದರೆ ಯಾರು? ತನ್ನ ಮನಸೊ? ರಕ್ತಸಂಬಂದವೊ? ಪ್ರೇಯಸಿಯೊ? ಅಥವಾ ಪ್ರೇಮ ಸ್ವಾರ‍್ಥದ ಅತ್ಯುನ್ನತ ಮಟ್ಟವೊ? ಇದರೆಲ್ಲದರ ಹಿಂದಿರುವುದು ನಿನ್ನ ಮನಸಿನ ಶಕ್ತಿ. ಪ್ರೇಮ ಒಂದು ಕಲೆ ಕಂಡಿತ ಅಲ್ಲ. ಅದೊಂದು ವಿದ್ಯೆಯೂ ಅಲ್ಲ. ಅದೊಂದು ಮಾನಸಿಕ ಅನುಭವ.

ಈ ಜಗದಲಿ ಬದುಕಲು ಸ್ವಾರ್ಥ, ತನ್ನ ಅಧಿಕಾರ ಬೇಕೇ ಬೇಕ? ಸ್ವಾರ್ಥ ಬದುಕಿನ ಬಂಡಿಗೆ ಚಕ್ರವೇ? ಈ ತರದ ಘರ್ಷಣೆಯಿಂದಾಗಿಯೇ ಜೀವನ ನಡೆಯುತ್ತಿದೆ. ಇದೆಲ್ಲಾ ಅರ್ಥರಹಿತವಾದ ಘರ್ಷಣೆಯೇ? ಘರ್ಷಣೆ ಬರಲು ಎರಡು ದಾರಿಯ ಪಥ ಕಾರಣವೇ? ನಿನ್ನ ಪ್ರತಿಚರ್ಯೆಯೂ ಒಳ್ಳೆದಕ್ಕೆ ಅಂದುಕೊಳ್ಳುತ್ತೇನೆ. ನಾನು ನೋಡುವ ದೃಸ್ಟಿಕೋನ ಆ ಮನಸಿಗಾಗಿ ಅಂದುಕೊಳ್ಳುತ್ತೇನೆ. ಈ ಅಂತರ್ಗತಕ್ಕಿಂತ ವಿಷಾಧ ಬೇರೊಂದಿಲ್ಲ.

ಎಲ್ಲೇ ಹೋಗು, ಏನೇ ಆಗು ಆದರೆ ಗ್ರೀಷ್ಮದ ಮಲ್ಲಿಗೆಯಂತೆ ಪರಿಮಳ ಸೂಸಿ ಸಂತೋಷದಿಂದಿರು. ಸಂತೋಷದ ಆತ್ಮದಲಿ ಬೆರೆತು ಚೆನ್ನಾಗಿರು. ದು:ಖ ಅರಿಯದೆ ನಗು ನಗುತಾ ಇರು.

ಚಂದಿರನ ಬೆಳದಿಂಗಳೇ
ನೀ ತಂಪಾದ ಹಿತವಾದ ಬೆಳಕ ನೀಡು.
ಬೆಳಕಾಗಿ ನೀ, ರಾಣಿಯಂತಿರು ಮಿನುಗು ನಕ್ಷತ್ರಲೋಕದಲಿ
ನಾ ನಿನಗೋಸ್ಕರ ಅಸ್ತಮಿಸುವೆ ಆ ಪಶ್ಚಿಮದಲಿ ಮಿತ್ರನಂತೆ
ಕಡಲಾಚೆಯ ಯಾರೂ ಕಾಣದ ಲೋಕದಲಿ.

Advertisements

Read Full Post »

ಕವಿತೆ ಕವಿತೆ ನನಗೊಂದು ಗುಟ್ಟು ಹೇಳುವೆಯಾ?

ನಂಬಿಕೆಗೆ ಬೆಲೆ ಕಟ್ಟುವೆಯಾ

ಜೀವನಕೆ ನಾಂದಿ ಹಾಡುವೆಯಾ

ಮನಸಿನ ಬೇನೆ ಮಾಸಿಸುವೆಯಾ ||೧||

 

 

ಕವಿತೆ ಕವಿತೆ ನೀನು ಎಲ್ಲಿ ಹೋದೆ?

ಹುಡುಕಾಡಿ ನಿದ್ದೆ ಹೋದೆಯಾ

ಬೇನೆಯಲಿ ಬೆಂದು ಹೋದೆಯ

ಬಯಸಿ ಬಯಸಿ ಸೋತು ಹೋದೆಯಾ ||೨||

 

 

ಕವಿತೆ ಕವಿತೆ ನಾ ಎಲ್ಲಿ ತೊಡಗಲಿ?

ಮನಸಲಿ ಬಂದಿಸಿಡಲೇ

ನಗಲೇ, ಅಳಲೇ, ಕಣ್ಣೀರಿಡಲೇ,

ನೀ ಬೇಗ ಹೇಳು, ಹೇಳು, ಹೇಳು…. |೩|

Read Full Post »

ಜೀವದ ಮೇಲೇರಿ ನಿಂತ ಬಾನು
ಹುಡುಕಾಡಿ ನಿದ್ದೆ ಹೋದ ಮಾತು
ಬೆಸೆದುಕೊಂಡಿತೇ ಪ್ರೀತಿ ||೧||

ಎಲ್ಲೆಲ್ಲೋ ಮರೆಯಾಗುವ ನಿನ್ನುಸಿರು
ಎಡೆಬಿಡದೆ ಕಾಡುವ ನನ್ನುಸಿರು
ಅತ್ತು ಮರೆಯಾಯಿತೇ ಶೃತಿ ||೨||

ಬೆಂಬಿಡದೆ ಕಾಡುವ ನಿನ್ನ ಕಿಚ್ಚು
ನನ್ನಯ ಮನಸಿನೊಳಗಿನ ಹುಚ್ಚು
ಮುಂದುವರಿಸಲೇ ಕ್ರಾಂತಿ ||೩||

ಏನೋ ಮಾಡಬೇಕೆಂಬ ಹಂಬಲ
ಹಿಂದಿನಂತಿಲ್ಲದ ನಿನ್ನ ಬೆಂಬಲ
ಸರಿಯಾಗಿತಲ್ಲವೇ ಬ್ರಾಂತಿ ||೪||

Read Full Post »