Feeds:
Posts
ಟಿಪ್ಪಣಿಗಳು

Posts Tagged ‘ಮುಸ್ಸಂಜೆ’

ಈ ಎಂಬತ್ತರ ಮುಪ್ಪಿನಲ್ಲೂ ನನಗೇಕೆ ಹೀಗೆ ಆಗುತ್ತಿದೆ? ಪ್ರಶ್ನಿಸಿದೆ ಅವಳನ್ನು. ಒಬ್ಬಂಟಿತನದ ಮನಸಿನ ಭಾವನೆಗಳು ಚುಚ್ಚಿ ಚುಚ್ಚಿ ಕೊಲ್ಲುತ್ತಿದೆಯೆಂದೆ.
ನಿಮಗೆಲ್ಲೋ ಅರಳು ಮರಳು ಎಂದಳು. ಇದು ಮುಪ್ಪಿನ ಬೇನೆಯೇನೂ ಅಲ್ಲ ಎಂದು ಮನಸು ಹೇಳುತಿದೆ. ಮತ್ತೇನು? ಒಬ್ಬಂಟಿತನದ ಭಾವನೆ ಯಾಕೆ ಈ ತರಹ ನನ್ನ ಚುಚ್ಚುತ್ತಿದೆ.
ಹುಟ್ಟಿನಿಂದಲೂ ಬಡತನದಿಂದ ಬದುಕುತ್ತಿದ್ದರೂ ಒಂಟಿತನ ಈ ತರಹ ಕಾಡಿರಲಿಲ್ಲ. ನನ್ನಪ್ಪನಿಗೋ ಎಂಟು ಹೆಮ್ಮಕ್ಕಳ ನಂತರ ಹಟಬಿಡದೆ ಆದ ಮುದ್ದಿನ ಕುವರ ನಾನು. ಇಬ್ಬರು ಅಕ್ಕಂದಿರ ಮದುವೆ ಮಾಡಿದ ಅಪ್ಪ ಕಣ್ಣು ಮುಚ್ಚಿದಾಗ, ನಾಲ್ಕನೆ ಓದುವ ನನಗೆ ಜವಾಬ್ದಾರಿ ಎಂದರೇನು ತಿಳಿಯದ ಸಮಯದಲ್ಲೇ ಮನೆಯ ಸಂಪೂರ್ನ ಭಾರ ಹೆಗಲಿಗೆ ಬಿತ್ತು. ಅಪ್ಪನ ಮಾಸ್ತರ ಕೆಲಸವೇನೋ ಅಮ್ಮನಿಗೆ ಸಿಕ್ಕಿತು. ಆದರೆ ಅಕ್ಕ್ಂದಿರ ಮದುವೆಯ ಚಿಂತೆಯಿಂದ ಹಾಸಿಗೆ ಹಿಡಿದ ಅಮ್ಮ. ಹ್ವದು ಅಂತಹ ಸಂದರ್ಭದಲ್ಲೂ ಎಲ್ಲೂ ಒಂಟಿತನದ ಭಾವ ನನ್ನ ಕಾಡಲಿಲ್ಲ. ಏನೋ ಜೀವನಚಕ್ರ ಉರುಳುವುದು ಎಂದು ದಿನ ದೂಡುತ್ತಿದ್ದ ಮೆಲುಕು. ಅಂದಿನ ಕಾಲದಲಿ ಹೆಮ್ಮಕ್ಕಳ ಮದುವೆ ಮಾಡುವ ಕಶ್ಟ ನಿಮಗೆ ನಾನು ಹೇಳಬೇಕೇ?
ಅಂತೂ, ಇಂತೂ ನನ್ನ ನಾಕನೆಯ ಓದಿನಿಂದ ನಲವತ್ತರ ಪ್ರಾಯದ ವರೆಗೆ ಅಕ್ಕಂದಿರ ಮದುವೆಯ ಯೋಚನೆಯಲ್ಲೇ ಮನಸು, ಮೆದುಳು ತುಂಬಿತ್ತು. ಎಲ್ಲರ ಮದುವೆ ಮಾಡಿ ಬಿಟ್ಟೆ. ಅಂತಹ ಸಮಯದಲಿ ಒಬ್ಬಂಟಿತನದ ಭಾವನೆ ಹೇಗೆ ಬರಬೇಕು?
ಮನೆಯಲ್ಲಿ ಕರೆಯುವ ದನಕೆ ಹಾಲು ಬತ್ತಿ, ದನ ನೋಡಲೆಂದು ಬಂದಾಗ ಕಂಡೆ ಅವಳ ಅಲ್ಲಿ. ಅಲ್ಲಿಯವರೆಗೆ ನನಗೆ ನನ್ನ ಮದುವೆಯ ಭಾವನೆಯೇ ಇರಲಿಲ್ಲ ಮನದಲ್ಲಿ.
ಹ್ವದು, ಕಂಡೆ ನಾನು ಅವಳ ಅಲ್ಲಿ. ನಲವತ್ತರ ಹರೆಯದಲ್ಲಿ. ಬೆಳ್ಳಗೆ ಹಾಲಿನಂತೆ ಬಿಳುಪಾಗಿದ್ದಳು. ಆದರೆ ನನಗೆ ಮ್ಯೆ ಬಣ್ಣವೂ ಅಲ್ಲ, ಒಯ್ಯಾರದಿ ನಿಂತ ಬಂಗಿಯೂ ಅಲ್ಲ. ಮತ್ತೇನು ಯೆಂದು ನೀವು ಕೇಳಬಹುದು. ಮುಗ್ಧತೆಯಲಿ ಚುಚ್ಚಿ ತಿವಿಯುವಂತಹ ಆ ಕಣ್ಣುಗಲ. ಹ್ವದು, ಒಂದು ಜೊತೆ ಕಣ್ಣುಗಳು. ದನವನ್ನು ತೋರಿಸಿ ಒಂದು ಆರು ಲೀಟರ್ ಹಾಲು ಇದೆ ಎಂದಾಗ ಅಂದುಕೊಂಡೆ, ದನದ ಜೊತೆಗೆ ಹುಡುಗಿಯನ್ನೂ ಕೇಳೋಣವೆಂದೆ. ಸ್ವಲ್ಪ ಅಂಜಿಕೆಯಾದರೂ ದನವನ್ನೂ ಹುಡುಗಿಯನ್ನೂ ಕೇಳಿದೆ. ಅಂದೂ ಕಾಡಿರಲಿಲ್ಲ ಇಂತಹ ಒಬ್ಬಂಟಿತನ. ಇಂದೇಕೆ ಹೀಗೆ?
ಜೀವನಚಕ್ರದ ಯೆರಡನೆ ಮಗ್ಗಲು ಸುಖಕರವೇನೂ ಆಗಿರಲಿಲ್ಲ. ಮಾಸ್ತರ ಕೆಲಸದ ಸಂಬಳ ಯಾವುದಕ್ಕೂ ಸಾಲದ ಸ್ಥಿತಿ. ಒಂದಾದರೊಂದತೆ ಐವರು ಹೆಮ್ಮಕ್ಕಳು. ಅರ್ದಾಂಗಿಯಾದರೂ ಅರ್ದ ಅಂಗಿಯಂತೆ ಜೊತೆಯಲ್ಲೇ ಇದ್ದರು ಬಿಡಿ. ಯೆಲ್ಲಾ ಮಕ್ಕಳಿಗೂ ವಿಧ್ಯಾಭ್ಯಾಸವನ್ನೆನೋ ಕೊಡಿಸಿದೆ. ಮತ್ತೂ ಕಲಿಯಬೇಕೆಂದು ಇಬ್ಬರು ದೇಶ ಬಿಟ್ಟು ಹೊರಟೇ ಹೋದರು. ಆಗಲೂ ಈ ತರಹ ಒಂಟಿತನ ಕಾದಿರಲಿಲ್ಲ. ಯಾಕೆ ಇಂದು ಹೀಗೆ?
ಮೊಮ್ಮಕ್ಕಳ ಕಾಣಬೇಕೆಂಬ ಕನಸ ಮಕ್ಕಳು ನೆರವೇರಿಸಿಯೂ ಬಿಟ್ಟರು. ಆದರೂ ಇಂದೇಕೆ ಹೀಗೆ?
ಸ್ವಂತ ಊರಿನಲ್ಲಿಯೇ ನಮ್ಮದೇ ಕೇರಿಯಲ್ಲಿ ಚೆಂದದ ಮನೆಯೂ ಕಟ್ಟಿದೆ. ಜೀವನವೆಂದರೆ ಸ್ವಂತ ತಾನೆ ಕಟ್ಟಿದ ಮನೆಯಲ್ಲಿ ಮೊಮ್ಮಕ್ಕಳ ಆಟವನ್ನು ನೋಡಿ ಕೇಕೆ ಹಾಕೆ ನಗುವುದೋ ಯೆಂಬ ಭಾವನೆಯೋ ಈ ಒಂಟಿತನದ ಹಿಂದೆ? ಏನನ್ನು ಸಾಧಿಸಿಧೆ? ಮತ್ತು ಏತಕ್ಕಾಗಿ ಯೆಂಬ ಉತ್ತರವಿಲ್ಲದ ಪ್ರಶ್ನೆಗಳೋ? ಇಂದು ಅತ್ತಿತ್ತ ನೋಡಿದರೆ ನೆರಳೂ ಕಾಣುವುದಿಲ್ಲವೇ? ಬೆಳಕಿನ ಮೂಲವೇ ಕೈಚೆಲ್ಲಿ ಕುಳಿತಿತೇ? ಇದಕ್ಕೆಲ್ಲಾ ಉತ್ತರ ಹೇಳುವರಾರು ಎಂದುಕೊಂಡು ಊರುಗೋಲು ಹಿಡಿದು ಮೆಲ್ಲನೆ ಹೊರನಡೆದೆ.

ಒಂಟಿತನ ನನಗೇಕೆ? ನನಗೇಕೆ?
ತುಂಟತನ ಬಿಟ್ಟು ವರುಷಗಳಾಯಿತೇಕೆ?
ಬಂಟನಂತೆ ನನ್ನ ಸುತ್ತುವ ನೆರಳಾದರೂ ಎಲ್ಲಿ?
ಕುಂಟು ನೆಪವ ಒಡ್ಡಿ ಮರೆಯಾಯಿತೇಕೆ?

Advertisements

Read Full Post »